Friday, July 5, 2019

ಮೋದಿ ಬಜೆಟ್ ವಿಶ್ಲೇಷಣೆ



ಬಜೆಟ್ ವಿಶ್ಲೇಷಣೆ:

ಎಲ್ಲಾ ಯೋಜನೆಗಳು ಕಾಗದದ ವಸ್ತು ಆಗಬಾರದು  ನಡೆಯಬೇಕು  ಮತ್ತು  ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳ ಇದು ಜನ ಜೀವನದ ಮೇಲೆ ಪರಿಣಾಮ ಬೀಳುತ್ತದೆ.  ಅಗತ್ಯ ವಸ್ತುಗಳ  ಬೆಲೆ ಹೆಚ್ಚಾಗಬಹುದು ನನ್ನ ಪ್ರಕಾರ ಇನ್ನು ಉತ್ತಮವಾದ ಬಜೆಟ್ ಕೊಡಬಹುದಿತ್ತು.  ಒಂದು ಒಳ್ಳೆಯ ಅಂಶ ಏನಂದ್ರೆ ಯೋಜನೇತರಃ  ವೆಚ್ಚಗಳು ಇಲ್ಲ ಆ ಮಠಕ್ಕೆ,  ದೇವಸ್ಥಾನಕ್ಕೆ ಮಸೀದಿಗೆ ಚರ್ಚ್ ಗೆ ಕೊಟ್ಟೆ ಅನ್ನುವುದು ಇಲ್ಲ ಎನ್ನುವುದು ಸಮಾಧಾನ.  ಕೆಲವು ಯೋಜನೆಗಳು ಬಹಳ ಮುಂದಾಲೋಚನೆ ಎನ್ನಬಹುದು.  ಎಲ್ಲರಿಗೂ ಶೌಚಾಲಯ,  ವಿದ್ಯುತ್,  ಶಿಕ್ಷಣ ಇತ್ಯಾದಿ  ಇದು ಯಾವತ್ತೋ ಆಗಬೇಕಿತ್ತು. ಮೇಲ್ನೋಟಕ್ಕೆ ಶ್ರೀಮಂತರ,  ಉದ್ಯಮಿಗಳ ಪರ ಬಜೆಟ್ ಎನ್ನಬಹುದು.  ನನ್ನ ಪ್ರಕಾರ 100ಕ್ಕೆ  48ಮಾರ್ಕ್ಸ್ ಕೊಡಬಹುದು.  ಜನ ಸಾಮಾನ್ಯನಿಗೆ ಬೇರೆ ಚಾಯ್ಸ್ ಇಲ್ಲ ಆಡಳಿತ ಪಕ್ಷಕ್ಕೆ ಬಹುಮತ ಬಂದಿದೆ ಇನ್ನು 4.5 ವರ್ಷ ಏನು ಮಾಡಲು ಸಾಧ್ಯವಿಲ್ಲ.  ಪಾಲಿಗೆ ಬಂದದ್ದು ಪಂಚಾಮೃತ.  ಪ್ರಧಾನಿಗಳು,  ಹಣಕಾಸು ಸಚಿವರು ಮುಂದಿನ ಬಜೆಟ್ ನಲ್ಲಿ ಆದರೂ ಪೆಟ್ರೋಲಿಯಂ ಉತ್ಪನ್ನಗಳನ್ನು GST ಗೆ ಸೇರಿಸಲಿ ನೀರಾವರಿ ಹಾಗೂ  ಕುಡಿಯುವ ನೀರಿನ ಬಗ್ಗೆ ಗಮನ ಕೊಡಲಿ ಅಚ್ಛೇ ದೀನ್ ಬರಲಿ.

ಧನ್ಯವಾದಗಳು,
ಆರ್. ನಾಗರಾಜ ಉಪಾಧ್ಯಾಯ 

No comments:

Post a Comment